ತೆರೆದ ಹಸ್ತ ಸ್ಮಾರಕವು ಭಾರತದ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡ ನಗರದಲ್ಲಿರುವ ಸಂಕೇತಿಕ ರಚನೆಯಾಗಿದೆ. ಈ ಸ್ಮಾರಕವನ್ನು ಲೆ ಕಾರ್ಬುಸಿಯರ್ ಎಂಬ ಫ್ರಾನ್ಸಿನ ವಾಸ್ತುಶಿಲ್ಪಿಯು ವಿನ್ಯಾಸ ಮಾಡಿದ್ದಾರೆ. ಇದು ಈಗಿನ ಚಂಡೀಗಡ ಸರ್ಕಾರದ ಲಾಂಛನವಾಗಿದ್ದು, "ಕೊಡುವ ಮತ್ತು ಸ್ವೀಕರಿಸುವ ಹಸ್ತ; ಶಾಂತಿ ಹಾಗೂ ಸಮೃದ್ದಿ, ಮತ್ತು ಮಾನವಕುಲದ ಐಕ್ಯತೆಯನ್ನು" ಸಾರುವ ಸಂಕೇತವಾಗಿದೆ.. ಇದು ೨೬ ಮೀ(೮೫ ಅಡಿ) ಉದ್ದವಿದ್ದು, ಲೆ ಕಾರ್ಬುಸಿಯರ್‍ಅವರ ಅನೇಕ ತೆರೆದ ಹಸ್ತ ಸ್ಮಾರಕಗಳಲ್ಲಿ ಅತಿ ದೊಡ್ಡದಾಗಿದೆ. ಲೋಹದ ರಚನೆಯು ೧೪ ಮೀ(೬೪ ಅಡಿ) ಉದ್ದವಿದ್ದು, ೫೦ ಟನ್‍ಗಳಷ್ಟು ತೂಕವಿದೆ ಮತ್ತು ಗಾಳಿ ಬೀಸಿದಾಗ ತಿರುಗುವ ಹಾಗೆ ರೂಪಿಸಲಾಗಿದೆ. == ಸಂಕೇತ == ಚಂಡೀಗಡದಲ್ಲಿನ ತೆರೆದ ಹಸ್ತವು(ಲ ಮೇನ್ ಔರ್ಟೆ) ಲೆ ಕಾರ್ಬುಸಿಯರ್‍ಅವರ ವಿನ್ಯಾಸಗಳಲ್ಲಿ ಪುನರಾವರ್ತಿಸುವ ತಿರುಳಾಗಿದೆ. ಇವರಿಗೆ ಈ ರಚನೆಯು, "ಶಾಂತಿ ಮತ್ತು ಸಾಮರಸ್ಯದ, ಮುಕ್ತವಾಗಿ ಕೊಡುವ ಮತ್ತು ಸ್ವೀಕರಿಸುವ ಸಂಕೇತವಾಗಿದೆ. == ಸ್ಥಳ == ತೆರೆದ ಹಸ್ತವು ಚಂಡೀಗಡದ ಕ್ಯಾಪಿಟಲ್ ಸಂಕೀರ್ಣದ ಸೆಕ್ಟರ್ ೧ ರಲ್ಲಿದೆ. ಇದರ ಹಿಂದೆಯೆ ಹಿಮಾಲಯ ಪರ್ವತ ಶ್ರೇಣಿಯ ಶಿವಾಲಿಕ ಬೆಟ್ಟಗಳಿವೆ. ಚಂಡೀಗಡ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ ೨೨ ಮತ್ತು ೨೧ರ(ಚಂಡೀಗಡ - ಮನಾಲಿ) ಮೂಲಕ ತಲುಪಬಹುದಾಗಿದೆ. == ರೂಪವೈಶಿಷ್ಟ್ಯಗಳು == ಮುಕ್ತ ಹಸ್ತ ಸ್ಮಾರಕವು ೧೨.೫ × ೯ ಮೀ (೪೧ ಅಡಿ × ೩೦ ಅಡಿ) ಕಂದಕದ ಮೇಲೆ ೨೬ ಮೀ (೮೫ ಅಡಿ) ಎತ್ತರವಿದೆ. ಕಾಂಕ್ರೀಟ್ ನಿಲುಗಟ್ಟೆಯ ಮೇಲೆ ನಿಲ್ಲಿಸಿದ ಲೋಹದ ವಾಯು ದಿಕ್ಸೂಚಿಯು ೧೪ ಮೀ (೪೬ ಅಡಿ) ಉದ್ದವಿದ್ದು, ೫೦ ಟನ್‍ಗಳಷ್ಟು ತೂಕವಿದೆ ಮತ್ತು ಹಾರುವ ಹಕ್ಕಿಯ ಹಾಗೆ ಕಾಣುತ್ತದೆ. ಸ್ಮಾರಕವನ್ನು ಶೀಟ್ ಲೋಹದಿಂದ ನಂಗಲ್‍ನಲ್ಲಿರುವ ಭಾಕ್ರ ನಂಗಲ್ ನಿರ್ವಹಣಾ ಸಮಿತಿಯ ಯಂತ್ರ-ನಿರ್ಮಾಣ ಸ್ಥಳದಲ್ಲಿ ಹ್ಯಾಂಡ್-ಕ್ಯಾಷ್ಟ್ ಮಾಡಲಾಗಿದೆ. ವಾಯು ದಿಕ್ಸೂಚಿಯ ಮೇಲ್ಮೈಯನ್ನು ಪಾಲಿಷ್ ಮಾಡಿದ ಸ್ಟೀಲ್‍ನಿಂದ ಹೊದಿಸಲಾಗಿದೆ ಮತ್ತು ಗಾಳಿ ಬೀಸಿದಾಗ ಸರಾಗವಾಗಿ ತಿರುಗಲು ಬಾಲ್ ಬಿಯರಿಂಗ್‍ಗಳಿರುವ ಸ್ಟೀಲ್ ಶಾಷ್ಟ್ ಮೇಲೆ ಜೋಡಿಸಲಾಗಿದೆ. == ಉಲ್ಲೇಖಗಳು ==